SHARE

ಕೆಲವರಿಗೆ ನಿದ್ದೆಯಾ ಸಮಸ್ಯೆ ಹೆಚ್ಚು ಏನು ಮಾಡಿದರು ನಿದ್ದೆ ಬರುವುದಿಲ್ಲ. ಆ ಸಮಯದಲ್ಲಿ ನೀರು ಕುಡಿಯುವುದು ಮನೆಯಲ್ಲಿ ಸುತ್ತಾಡುವುದು ಇದೆನ್ನೆಲ್ಲ ಮಾಡುತ್ತಾರೆ.
ಮತ್ತೆ ನಿದ್ದೆ ಬಾರದೆ ಧೂಮಪಾನ ಮಾಡುವುದು ಇದೆಲ್ಲ ಆಗುತ್ತೆ ಇದರಿಂದ ನಿಮ್ಮ ಅರೋಗ್ಯ ಮತ್ತಷ್ಟು ಕೆಡುತ್ತದೆ.

ಹಾಗಾದ್ರೆ ನಿದ್ದೆ ಬರಲು ಯಾವ ಆಹಾರ ತಿನ್ನಬೇಕು ಅಂತೀರಾ ಇಲ್ಲಿದೆ ನೋಡಿ.
ಬಾಳೆಹಣ್ಣು.
ಜೇನುತುಪ್ಪ
ಕೊಬ್ಬರಿ ಎಣ್ಣೆ

ಬಾಳೆಹಣ್ಣು : ನೀವು ಪ್ರತಿದಿನ ಬಾಳೆಹಣ್ಣು ಸೇವನೆಯಿಂದ ಒಳ್ಳೆ ನಿದ್ದೆಯನ್ನು ಮಾಡಬಹುದು. ಇದರಲ್ಲಿ ಪೊಟೇಷಿಯಮ್ ಅಂಶ ಹೆಚ್ಚು ಇರುವುದರಿಂದ ಇದು ನಿಮ್ಮ ದೇಹದ ನೋವು ಹೋಗಲಾಡಿಸಿ ಸುಖ ನಿದ್ದೆ ಮಾಡಲು ಸಹಕಾರಿಯಾಗುತ್ತದೆ.

ಜೇನುತುಪ್ಪ: ನಿಮ್ಮ ದೇಹಕ್ಕೆ ಜೇನು ತುಪ್ಪ ತುಂಬ ಸಹಕಾರಿಯಾಗಿ ನಿದ್ದೆ ಮಾಡಲು ಒಳ್ಳೆ ಆಹಾರವಾಗಿದೆ. ಇದು ಸಾಮಾನ್ಯವಾಗಿ ಸಕ್ಕರೆಯ ಅಂಶವನ್ನು ಹೊಂದಿದ್ದು ನಮ್ಮ ದೇಹದ ಬಾಗಗಳಿಗೆ ಇನ್ಸುಲಿನ್ ಒದಗಿಸುತ್ತದೆ. ಮತ್ತೆ ನಮ್ಮ ಮೆದುಳಿಗೆ ಒಂದು ರೀತಿ ಮತ್ತೇರಿಸುವ ರೀತಿಯಲ್ಲಿ ಕೆಲಸ ಮಾಡುತ್ತದೆ. ನೀವು ಇಂತಹ ಸಮಯದಲ್ಲಿ ಆರಾಮಾಗಿ ನಿದ್ದೆಗೆ ಜಾರಬಹುದು.

ಕೊಬ್ಬರಿ ಎಣ್ಣೆ: ನೀವು ಮಲಗುವ ಮುನ್ನ ನಿಮ್ಮ ತಲೆಗೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಮಲಗಿದರೆ ಒಳ್ಳೆ ನಿದ್ದೆ ಮಾಡಬಹುದು.
ಇದು ದೇಹಕ್ಕೆ ಮತ್ತು ನಿಮ್ಮ ತಲೆಗೆ ತಂಪಾಗಿಸಿ ಯಾವುದೇ ಚಿಂತೆ ಇಲ್ಲದೆ ಮಲಗಿ ಒಳ್ಳೆ ನಿದ್ದೆ ಮಾಡಬಹುದು.

NO COMMENTS

LEAVE A REPLY