SHARE

1. ತೂಕ ನಷ್ಟಕ್ಕೆ ಯೋಗ.

ತೂಕ ನಷ್ಟ ಅನೇಕರ ಬಯಕೆಗಳಲ್ಲಿ ಒಂದು ನೀವು ಪ್ರತಿನಿತ್ಯ ಸೂರ್ಯ ನಮಸ್ಕಾರ ಮತ್ತು ಕಪಾಲ್ಭಾತಿ ಪ್ರಾಣಾಯಾಮವನ್ನು ಮಾಡುವುದರಿಂದ ನಿಮ್ಮ ತೂಕವನ್ನು ಗಣನೀಯವಾಗಿ ಕಡಿಮೆ ಮಾಡಿಕೊಳ್ಳಬಹುದು.

2. ಒತ್ತಡ ಪರಿಹಾರಕ್ಕಾಗಿ ಯೋಗ.

ದಿನದಲ್ಲಿ ನೀವು ಕೆಲವು ನಿಮಿಷಗಳು ಕಾಲ ಯೋಗಾಭ್ಯಾಸ ಮಾಡಿದಲ್ಲಿ, ಯೋಗವು ಒತ್ತಡವನ್ನು ತೊಡೆದುಹಾಕಲು ಒಂದು ಉತ್ತಮ ವಿಧಾನವಾಗಬಹುದು – ಅದು ದೇಹ ಮತ್ತು ಮನಸ್ಸಿನಲ್ಲಿರುವ ಅನೇಕಾನೇಕ ಕಲ್ಮಶವನ್ನು ಸಂಪೂರ್ಣವಾಗಿ ತೊಡೆದುಹಾಕಬಲ್ಲದು. ಯೋಗದ ಭಂಗಿಗಳು, ಪ್ರಾಣಾಯಾಮ ಮತ್ತು ಧ್ಯಾನ ಒತ್ತಡವನ್ನು ದೂರಮಾಡಲು ಪರಿಣಾಮಕಾರಿ ತಂತ್ರಗಳಾಗಿವೆ.

3. ಆಂತರಿಕ ಶಾಂತಿಗಾಗಿ ಯೋಗ.

ನಾವು ಎಲ್ಲರೂ ಶಾಂತಿಯುತ, ಪ್ರಶಾಂತವಾದ ತಾಣಗಳನ್ನು ಭೇಟಿ ಮಾಡಲು ಇಷ್ಟಪಡುತ್ತೇವೆ, ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಇಚ್ಛಿಸುತ್ತೇವೆ. ಶಾಂತಿಯನ್ನು ಯೋಗದಿಂದ ಇವೆಲ್ಲವನ್ನೂ ನಮ್ಮೊಳಗೆ ಕಂಡುಕೊಳ್ಳಬಹುದು. ಪ್ರತಿದಿನ ಯೋಗ ಮತ್ತು ಧ್ಯಾನದೊಂದಿಗೆ ತೊಂದರೆಗೊಳಗಾದ ಮನಸ್ಸನ್ನು ಶಾಂತಗೊಳಿಸಲು ಉತ್ತಮ ವಿಧಾನವಾಗಿದೆ.

4. ರೋಗನಿರೋಧಕ ಶಕ್ತಿ ಸುಧಾರಿಸಲು ಯೋಗ.

ನಮ್ಮ ವ್ಯವಸ್ಥೆಯು ದೇಹ, ಮನಸ್ಸು ಮತ್ತು ಆತ್ಮದ ಸಂಗಮವಾಗಿದೆ. ದೇಹದಲ್ಲಿ ಅಸಮರ್ಪಕತೆಯು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮನಸ್ಸಿನಲ್ಲಿ ಚಡಪಡಿಕೆ ದೇಹದಲ್ಲಿ ಕಾಯಿಲೆಯಂತೆ ಕಾಣಿಸಬಹುದು. ಯೋಗ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಉಸಿರಾಟವನ್ನು ಬಲಪಡಿಸುತ್ತದೆ, ಇವೆಲ್ಲವೂ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಇಮ್ಮಡಿಗೊಳಿಸುತ್ತವೆ.

5. ಶಕ್ತಿ ಹೆಚ್ಚಿಸಲು ಯೋಗ.

ದಿನದ ಅಂತ್ಯದ ವೇಳೆಗೆ ನೀವು ಸಂಪೂರ್ಣವಾಗಿ ಸುಸ್ತಾಗಿರುತ್ತೀರಾ? ಪ್ರತಿನಿತ್ಯ ನಿಮ್ಮನ್ನು ಆಯಾಸ ಕಾಡುತ್ತಿದೆಯಾ? ಹಾಗಿದ್ದರೆ ದಿನಕ್ಕೆ ಕೇವಲ ೧೦ ನಿಮಿಷಗಳಷ್ಟು ಯೋಗ ಮಾಡಿ ನಂತರ ನಿಮಗೇ ತಿಳಿಯಲಿದೆ ನೀವೆಷ್ಟು ತಾಜಾತನದಿಂದ / ಉತ್ಸಾಹಭರಿತಯಾರಾಗಿರುತ್ತೀರಿ ದಿನಪೂರ್ತಿ ಎಂಬುದು. ಯೋಗ ನಿಮ್ಮಲ್ಲಿ ಹೊಸ ಚೈತನ್ಯ ತುಂಬುತ್ತದೆ ನೀವು ವಯಸ್ಸಾದಂತೆ ನಿಮ್ಮ ಶಕ್ತಿ ಕಡಿತಗೊಳ್ಳುತ್ತಿದ್ದರೆ ಯೋಗ ನಿಮ್ಮಲ್ಲಿ ಹೊಸ ಹುರುಪನ್ನು ತುಂಬುವುದರಲ್ಲಿ ಸಂಶಯವಿಲ್ಲ.

6. ದೇಹದ ಜಡತ್ವ ನಿವಾರಣೆಗಾಗಿ ಯೋಗ.

ಯೋಗವು ಶಕ್ತಿಯುತ ಮತ್ತು ಹೊಂದಿಕೊಳ್ಳುವಂತಹ ದೇಹವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ನಿಯಮಿತವಾದ ಯೋಗದ ಅಭ್ಯಾಸ, ದೇಹ ಸ್ನಾಯುಗಳನ್ನು ವಿಸ್ತರಿಸುತ್ತದೆ. ಇದು ದೇಹದ ಜಡತ್ವವನ್ನು ನಿವಾರಿಸುತ್ತದೆ.

NO COMMENTS

LEAVE A REPLY