SHARE

ಚಾಕ್ಲೆಟ್ ತಯಾರಿಸಲು ಬೇಕಾಗುವ ಪದಾರ್ಥಗಳು

ಚಾಕೋಲೇಟ್ ಪುಡಿ ಒಂದು ಕಪ್
ಸಕ್ಕರೆ ಎರಡು ಕಪ್
ಬೆಣ್ಣೆ ಅರ್ಧ ಕಪ್
ಅಮೂಲ್ ಹಾಲಿನ ಪುಡಿ ಪೌಡರ್ ಮೂರೂ ಕಪ್

ತಯಾರಿಸುವ ವಿಧಾನ:
ಹಾಲಿನ ಪುಡಿ ಹಾಗೂ ಚಾಕಲೇಟ್ ಪುಡಿಯನ್ನು ಒಂದು ಪಾತ್ರೆಯಲ್ಲಿ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು ನಂತರ ದಪ್ಪದ ಕಡಾಯಿಯನ್ನು ಒಲೆಯ ಮೇಲಿಟ್ಟು ಸ್ವಲ್ಪ ನೀರು ಹಾಕಿ ನೀರು ಬಿಸಿಯಾಗುವಾಗ ಸಕ್ಕರೆ ಹಾಕಿ ಚೆನ್ನಾಗಿ ಕಲಕಿ. ಅದಾದಮೇಲೆ ಪಾಕ ಸ್ವಲ್ಪ ಮಂದವಾಗುತ್ತಾ ಬಂದಾಗ ಬೆಣ್ಣೆ ಹಾಕಿ.

ನಂತರ ಬೆರೆಸಿದ ಚಾಕೋಲೇಟ್ ಪುಡಿ ಹಾಗೂ ಹಾಲಿನ ಪುಡಿ ಸೇರಿಸಿ ಕಲಸಿ. ಗಟ್ಟಿಯಾಗುತ್ತಾ ಬಂದಾಗ ಕೆಳಗಿಳಿಸಿ. ಈ ಮಿಶ್ರಣವನ್ನು ತುಪ್ಪ ಸವರಿದ ಪಾತ್ರೆಯಲ್ಲಿ ಹಾಕಿ ನಂತರ ತಟ್ಟೆಗೆ ಸುರಿದು ತಣ್ಣಗಾಗಲು ಬಿಡಿ. ನಂತರ ಚಾಕು ತೆಗೆದುಕೊಂಡು ಗಟ್ಟಿಯಾದ ಚಾಕಲೇಟ್ ಅನ್ನು ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿದರೆ ನೀವು ತಿನ್ನಲು ಇಷ್ಟಪಡುವ ಚಾಕಲೇಟ್ ರೆಡಿ ಇರುತ್ತದೆ.

NO COMMENTS

LEAVE A REPLY