SHARE

ಮೇಷ:– ನಿಮ್ಮ ಮುಂದಿರುವ ಜವಾಬ್ದಾರಿ ಬಹು ಮಹತ್ತರವಾದದ್ದು. ಅದನ್ನು ನೀವು ಸಲೀಸಾಗಿ ನಿಭಾಯಿಸುವಿರಿ. ಅಕ್ಕಪಕ್ಕದವರು, ನಿಮ್ಮ ಸ್ನೇಹಿತರು ಇದನ್ನು ಕಂಡು ಆಶ್ಚರ್ಯ ಚಕಿತರಾಗುವರು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ವೃಷಭ:– ಕೆಲವು ತೀರ್ಮಾನಗಳನ್ನು ತಕ್ಷ ಣದಲ್ಲಿ ತೆಗೆದುಕೊಳ್ಳಲು ಬರುವುದಿಲ್ಲ. ನಿಮ್ಮ ಮನದ ವಿಚಾರಗಳನ್ನು ಮನೆಯ ಹಿರಿಯರ ಬಳಿ ಚರ್ಚಿಸಿ ಕಾರ್ಯ ಆರಂಭಿಸುವುದು ಒಳ್ಳೆಯದು. ಮಾತು ಮಿತವಾಗಿರಲಿ.

ಮಿಥುನ:– ಈ ದಿನ ಸ್ವಲ್ಪ ನಿರಾಶೆಯ ವಾತಾವರಣ ಎದುರಾಗುವುದು. ಹಣಕಾಸಿನ ಚಿಂತೆ ಇರುವುದಿಲ್ಲ. ಮೇಲಧಿಕಾರಿಗಳು ನಿಮ್ಮ ಕಾರ್ಯ ತತ್ಪರತೆಯನ್ನು ಮನತುಂಬಿ ಹೊಗಳುವರು.

ಕಟಕ:- ಕಚೇರಿಯಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರುವುದು. ಇದರಿಂದ ನಿಮಗೆ ನೂತನ ಅನುಭವವಾಗುವುದು. ಸ್ನೇಹಿತರು ಮತ್ತು ಸಹೋದ್ಯೋಗಿಗಳು ನಿಮಗೆ ಸಹಕಾರವನ್ನು ನೀಡುವರು. ನಿಮ್ಮ ಕುಲದೇವತೆಯ ಪ್ರಾರ್ಥನೆ ಮಾಡಿ.

ಸಿಂಹ:- ನಿಮ್ಮ ಆತ್ಮವಿಶ್ವಾಸ ಬಲು ದೊಡ್ಡದು. ಆದರೆ ಹುಂಬುತನದಿಂದ ಸಮಸ್ಯೆಗಳನ್ನು ತಂದುಕೊಳ್ಳುವಿರಿ. ಹಾಗಾಗಿ ಜಾಗ್ರತೆ ಅಗತ್ಯ. ಅತ್ಯಂತ ನಂಬಿದ ಸ್ನೇಹಿತರುಗಳೆ ಕೈಕೊಡುವ ಸಂದರ್ಭವಿರುತ್ತದೆ.

ಕನ್ಯಾ:- ಸರ್ಕಾರಿ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುವುದರಿಂದ ಈ ದಿನ ನಿಮಗೆ ಬಹು ಬೇಸರವುಂಟಾಗುವ ಸಾಧ್ಯತೆ ಇದೆ. ತಾಳ್ಮೆ ಕಳೆದುಕೊಳ್ಳದಿರಿ. ಕಚೇರಿಯಲ್ಲಿ ಎಲ್ಲರೂ ಸಮಾನರು ಎಂಬ ಭಾವನೆಯನ್ನು ರೂಢಿಸಿಕೊಳ್ಳಿ.

ತುಲಾ:- ಅವಿವಾಹಿತರು ಹಾಗೂ ಪ್ರೇಮಿಗಳಿಗೆ ಉತ್ತಮ ದಿನ. ಕೆಲವರಿಗೆ ಮದುವೆ ಪ್ರಸ್ತಾಪಗಳು ಎದುರಾಗುವುದು. ಪ್ರೇಮಿಗಳನ್ನು ಒಂದು ಮಾಡಲು ಮನೆಯವರು ಸ್ನೇಹಿತರು ಪ್ರಾಮಾಣಿಕ ಪ್ರಯತ್ನ ಮಾಡುವರು.

ವೃಶ್ಚಿಕ:- ಹೆದರುತ್ತ ಕುಳಿತರೆ ಕೆಲಸ ಆಗುವುದಿಲ್ಲ. ಧೈರ್ಯಂ ಸರ್ವತ್ರ ಸಾಧನಂ ಎಂಬುದನ್ನು ನೆನಪಿಸಿಕೊಂಡು ಕಾರ್ಯ ಪ್ರವೃತ್ತರಾಗಿ. ಸಂತೋಷದ ಕೂಟಗಳಿಗೆ ಹಣ ಖರ್ಚು ಮಾಡುವ ಪ್ರಮೇಯ ಒದಗಿ ಬರುವುದು.

ಧನಸ್ಸು:– ನಿಮ್ಮ ಬಾಯಿ ದೊಡ್ಡದು. ಅಂದರೆ ಮಾತುಗಳಿಗೆ ಲಗಾಮಿಲ್ಲ. ಸಿಕ್ಕಾಪಟ್ಟೆ ಮಾತನಾಡಿಯೇ ಸಮಸ್ಯೆಗಳನ್ನು ತಂದುಕೊಳ್ಳುವ ಸಾಧ್ಯತೆ ಇದೆ. ಕುಲದೇವತಾ ಪ್ರಾರ್ಥನೆ ಮತ್ತು ಪ್ರಾಣಾಯಾಮದ ಮೂಲಕ ಮನಸ್ಸನ್ನು ನಿಯಂತ್ರಿಸಿ.

ಮಕರ:– ಒಟ್ಟೊಟ್ಟಿಗೆ ಹಲವು ಕೆಲಸಗಳು ಹೆಗಲೇರುವುದರಿಂದ ಈ ದಿನ ವಿಶ್ರಾಂತಿಗೆ ಸಂಚಕಾರ ಬರಲಿದೆ. ಸಾಧ್ಯವಾದಷ್ಟು ಸಂಭಾಳಿಸಿಕೊಂಡು ಹೋಗಲು ಪ್ರಯತ್ನಿಸಿ. ಆರ್ಥಿಕ ಮುಗ್ಗಟ್ಟು ಎದುರಾಗುವುದು.

ಕುಂಭ:– ಆರೋಗ್ಯದ ವಿಷಯದಲ್ಲಿ ಸಣ್ಣಪುಟ್ಟ ತೊಂದರೆಗಳು ಕಾಣಿಸಿಕೊಳ್ಳುವವು. ಸರಿಯಾದ ಸಮಯಕ್ಕೆ ಭೋಜನ ಸ್ವೀಕರಿಸುವುದು ಒಳ್ಳೆಯದು. ವೈಯಕ್ತಿಕ ಕೆಲಸ ಕಾರ್ಯಗಳು ಅಡೆತಡೆಯಿಲ್ಲದೆ ನಡೆಯುವವು.

ಮೀನ:- ವೃತ್ತಿಯಲ್ಲಿ ಬದಲಾವಣೆಯ ಸಾಧ್ಯತೆಗಳು ದಟ್ಟವಾಗಿವೆ. ವರ್ಗ ಆಗಬಹುದು. ಆಪ್ತರೊಂದಿಗೆ ಸಮಾಲೋಚನೆ ನಡೆಸದೇ ಮುಂದಡಿ ಇಡುವುದು ಜಾಣತನದ ಲಕ್ಷ ಣವಲ್ಲ. ಕೌಟುಂಬಿಕವಾಗಿ ನೆಮ್ಮದಿಯ ದಿನ.

NO COMMENTS

LEAVE A REPLY