SHARE

ಜೆ.ಎಸ್. ಜಗದೀಶ್ ಒಬ್ಬ ಸರಳ, ಸಜ್ಜನ, ನಾಗರೀಕ ಸ್ನೇಹಿ ನಗರಪಾಲಿಕೆ ಸದಸ್ಯ. ವಾರ್ಡಿನ ಪ್ರತಿಯೊಬ್ಬರು ಕೂಡ ಜೆ.ಎಸ್.ಜಗದೀಶ್ “ನಮ್ಮ ಮನೆ ಹುಡುಗ” ಇದ್ದಂತೆ ಎನ್ನುವ ಅಭಿಮಾನದ ಮಾತುಗಳನ್ನು ಆಡುತ್ತಾರೆ. ತಮ್ಮ ಕ್ರಿಯಾಶೀಲ ಕೆಲಸಗಳ ಮೂಲಕ ವಾರ್ಡಿನ ಮನೆಮಾತಾಗಿದ್ದಾರೆ. “ಜನಸೇವೆಯೇ ಜನಾರ್ಥನನ ಸೇವೆ” ಎಂದು “ಕಾಯಕವೇ ಕೈಲಾಸ”ವೆಂದು ಹಗಲಿರುಳು ನಾಗರೀಕರ ಏಳಿಗೆಗಾಗಿ ದುಡಿಯುತ್ತಿರುವ ‘ಕರ್ಮಯೋಗಿ’ ಎಂದರೆ ತಪ್ಪಾಗಲಾರದು.

ಮೈಸೂರು ನಗರಲ್ಲೇ ತಮ್ಮ ವಾರ್ಡ್ ನಂಬರ್ 1 ಆಗುವಂತೆ ಮಾಡಿರುವ ಕೀರ್ತಿ ಜೆ.ಎಸ್. ಜಗದೀಶ್ ಅವರಿಗೆ ಸಲ್ಲುತ್ತದೆ. ಈ ಮೂಲಕ ಮೈಸೂರು ಮಹಾನಗರಪಾಲಿಕೆಯ ನಂಬರ್ 1 ಕಾರ್ಪೋರೇಟರ್ ಎಂಬ ಹೆಸರಿಗೆ ಭಾಜನರಾಗಿದ್ದಾರೆ. ವಾರ್ಡಿನ ನಾಗರೀಕರು ತಮ್ಮ ಸಮಸ್ಯೆ ಮತ್ತು ಕುಂದುಕೊರತೆಗಳನ್ನು ತಮ್ಮ ಮನೆಯಲ್ಲೇ ಕುಳಿತು, ಬೆರಳತುದಿಯಿಂದ ವಾಟ್ಸ್ ಆಪ್, ಫೇಸ್ ಬುಕ್, ಇನ್ಟೋಗ್ರಾಮ್, ಟಿಟ್ವರ್, ಮೊಬೈಲ್ ಸಂದೇಶ ಮತ್ತು ಕರೆಗಳಂತಹ ಸಾಮಾಜಿಕ ಜಾಲತಾಣಗಳ ಮೂಲಕ ದಾಖಲಿಸಿದ ಮರುಕ್ಷಣವೇ ಕಾರ್ಯಾಚರಣೆಗೆ ತಂಡ ಸನ್ನದ್ಧವಾಗಿರುತ್ತದೆ. ತತಕ್ಷಣವೇ ಸ್ಪಂದಿಸುವ ಮತ್ತು ಉತ್ತರಿಸುವ ಇವರ ಗುಣ ಮತದಾರರ ಮನಗೆಲ್ಲುವಲ್ಲಿ ಸಹಕಾರಿಯಾಗಿದೆ. ಸಾವಿರಾರು ನಾಗರೀಕರ ಮೂಲಭೂತ ಸಮಸ್ಯೆಗಳು ಸಾಮಾಜಿಕ ಜಾಲತಾಣದ ಮೂಲಕ ಬಗೆಹರಿಸುವುದರ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಬಹುಷ: ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಸಾಮಾಜಿಕ ಜಾಲತಾಣಗಳನ್ನು ಸಾರ್ವಜನಿಕರ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಮರ್ಥವಾಗಿ ಬಳಸಿಕೊಂಡ ಮೊಟ್ಟ ಮೊದಲ ರಾಜಕಾರಿಣಿ ಎಂಬ ಪ್ರಶಂಸೆಯನ್ನು ಪತ್ರಿಕೆಗಳು ಮತ್ತು ಮಾಧ್ಯಮಗಳು ಮುಕ್ತಕಂಠದಿಂದ ಹಾಡಿ ಹೊಗಳಿವೆ.

ವಾರ್ಡಿನಲ್ಲಿ ತಮ್ಮ ಸುಸಜ್ಜಿತವಾದ ಕಚೇರಿಯನ್ನು ತೆರೆಯುವುದರ ಮೂಲಕ ಜನಸಾಮಾನ್ಯರು ತಮ್ಮ ಕುಂದುಕೊರತೆಗಳನ್ನು ದಾಖಲಿಸುವ ವ್ಯವಸ್ಥೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ವಿವಿಧ ರೀತಿಯ ಸರ್ಕಾರಿ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ಕೇಂದ್ರವಾಗಿಯೂ ಈ ಕಚೇರಿ ಕೆಲಸ ನಿರ್ವಹಿಸುತ್ತಿದೆ. ನಾಗರೀಕರ ಮತ್ತು ಪಾಲಿಕೆಯ ನಡುವಿನ ಸುವರ್ಣ ಸೇತುವೆಯಾಗಿ ಈ ಕಚೇರಿ ಕೆಲಸ ನಿರ್ವಹಿಸುತ್ತಿದೆ.
ಸರಳ, ಸಜ್ಜನಿಕೆ, ವಿದ್ಯಾವಂತ, ಬುದ್ಧಿವಂತ ಮತ್ತು ಕ್ರಿಯಾಶೀಲರಾದ ಯುವಜನರ ತಂಡವೇ ಜೆ.ಎಸ. ಜಗದೀಶ್ ಅವರ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿದೆ. ‘ಟೀಮ್ ವರ್ಕ್’ ಎಂದರೆ ಏನು? ಎನ್ನುವುದನ್ನು ಜೆ.ಎಸ್. ಜಗದೀಶ್ ನೇತೃತ್ವದ ಈ ಯುವಪಡೆಯ ಕಾರ್ಯವೈಖರಿಯನ್ನು ನೋಡಿ ತಿಳಿಯಬೇಕು ಎನ್ನುತ್ತಾರೆ ವಾರ್ಡಿನ ಹಿರಿಯ ನಾಗರೀಕರು.

ನಾಗರೀಕರ ಮೂಲಭೂತ ಅವಶ್ಯಕತೆಗಳಾದ ರಸ್ತೆ, ನೀರು, ಒಳಚರಂಡಿ ಮತ್ತು ಸ್ವಚ್ಛತೆ ಹಾಗೂ ಹಸಿರಿನಿಂದ ಕಂಗೊಳಿಸುವ ಸುಂದರವಾಗಿ ಕಾಣುವ ಉದ್ಯಾನವನಗಳು, ಭದ್ರತೆಗಾಗಿ ಸಿಸಿ ಕ್ಯಾಮಾರಗಳು, ಸುಸಜ್ಜಿತ ಸೌಲಭ್ಯಗಳುಳ್ಳ ಮಕ್ಕಳ ಆಟದ ಮೈದಾನ, ಬೀದಿ ದೀಪ, ಹೀಗೆ ಹತ್ತು ಹಲವು ನಾಗರೀಕರ ಸೌಲಭ್ಯಗಳು ಸಕಾಲಕ್ಕೆ ತರುವಲ್ಲಿ ಬಹುತೇಕ ಯಶಸ್ವಿಯಾಗಿ ಮತದಾರರ ವಿಶ್ವಾಸಾರ್ಹತೆಗೆ ಪಾತ್ರರಾಗಿದ್ದಾರೆ. ನಾಗರೀಕರ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ನೀಡಿದ್ದ ಬಹುತೇಕ ಆಶ್ವಾಸನೆಗಳೆಲ್ಲಾ ಸಕಾಲಕ್ಕೆ ಪೊರೈಸಿದ್ದಾರೆ.
ಕಲೆ ಸಂಸ್ಕೃತಿ ಮತ್ತು ಸಾಹಿತ್ಯ ಕಾರ್ಯಕ್ರಮಗಳಿಗೆ ಸುಸಜ್ಜಿತ ರಂಗಮಂದಿರಗಳು, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಯೋಗ ಮತ್ತು ಧ್ಯಾನ ಮಂಟಪ, ಬಡವರು ತಮ್ಮ ಕುಟುಂಬ ಕಾರ್ಯಕ್ರಮಗಳಿಗಾಗಿ ಸುಸಜ್ಜಿತ ಸಮುದಾಯ ಭವನಗಳು ಮತ್ತು ಮಹಿಳಾ ಸಂಘದ ಸದಸ್ಯರಿಗೆ ಸಭೆ ನಡೆಸಲು ಅನುಕೂಲವಾಗುವಂತೆ ಮೇಲ್ಛಾವಣಿ ವ್ಯವಸ್ಥೆ ಮಾಡಲಾಗಿದೆ.

ಇನ್ನು ಶಿಕ್ಷಣದ ವಿಚಾರಕ್ಕೆ ಬಂದರೆ ಇವರು ಪ್ರತಿ ವರ್ಷ ಹೆಚ್ಚು ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ “ಪ್ರತಿಭಾ ಪುರಸ್ಕಾರ” ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸೂಕ್ತ ಬಹುಮಾನ ಅಥವಾ ಧನ ಸಹಾಯ ಮಾಡುತ್ತಾರೆ. ಮತ್ತು ಶಾಲೆಗಳಿಗೆ ಡೆಸ್ಕ್ ಮತ್ತು ಉಚಿತ ಪಠ್ಯಪುಸ್ತಕಗಳನ್ನು ವಿತರಿಸುತ್ತಾರೆ. ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ಅಲ್ಪ ಸಂಖ್ಯಾತರು ಮತ್ತು ಹಿಂದುಳಿದವರಿಗೆ ಸಮರ್ಪಕವಾಗಿ ಮತ್ತು ಸಕಾಲದಲ್ಲಿ ವಿತರಿಸಿದ್ದಾರೆ.

ಇದಲ್ಲದೆ ಇನ್ನೊಂದು ವಿಶೇಷವಾದ ವಿಷಯವನ್ನು ನಿಮ್ಮ ಮುಂದೆ ಹೇಳಲೇ ಬೇಕು. ಅದು, ಏನೆಂದರೆ ದಸರಾ ಸಮಯದಲ್ಲಿ ಆನೆಗಳ ಮಾವುತರ ಮಕ್ಕಳನ್ನೂ ಸಹ ಇವರು ಗುರುತಿಸಿ, ಅವರಿಗೂ ಸಹ ಉಚಿತ ಪಠ್ಯ ಪುಸ್ತಕಗಳನ್ನು ನೀಡಿ ಓದಲು ಪ್ರೇರೆಪಿಸಿರುವುದು ಸ್ವಾಗತರ್ಹ.

1. ನಮ್ಮ 22ನೇ ವಾರ್ಡಿನ ಜನಪ್ರಿಯ ನಗರ ಪಾಲಿಕಾ ಸದಸ್ಯರು ಮತ್ತು ನಮ್ಮೆಲ್ಲರ ಪ್ರೀತಿಯ ಹುಡುಗ ಜೆ. ಎಸ್. ಜಗದೀಶ್ ಅವರು ಅಭಿವೃದ್ಧಿ ಕಾರ್ಯಗಳನ್ನು ಜನಮೆಚ್ಚುವಂತೆ ಮಾಡಿದ್ದಾರೆ. ಅವರಿಗೆ ಶುಭವನ್ನು ಕೋರುತ್ತೇನೆ.
– ಎಂ. ಮಲ್ಲಣ್ಣ, ಬಸವೇಶ್ವರನಗರ

2. ಜಗದೀಶ್ ಅವರು ನಮ್ಮ ಟಿ. ಕೆ. ಬಡಾವಣೆ ಒಳಗೊಂಡ 22ನೇ ವಾರ್ಡಿನ ಕಾರ್ಪೊರೇಟರ್ ಆಗಿ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವಂತಹ ಜನೋಪಯೋಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಸಾಮಾಜಿಕ ಕಳಕಳಿ ಇದೆ. ಶ್ರದ್ಧಾ ಭಕ್ತಿಯಿಂದ ಜನರನ್ನು ಸ್ಪಂದಿಸುವ ಹಾಗೂ ಸಂಪರ್ಕಿಸುವ ವಿಧೇಯತೆ ಇದೆ. ಇವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸುತ್ತೇನೆ.
– ಸಿ. ಶುಭಾ ಡಿ. ಕಾಮತ್, ಟಿ. ಕೆ. ಬಡಾವಣೆ

3. ನಮ್ಮ 22ನೇ ವಾರ್ಡಿನ ಮಹಾನಗರ ಪಾಲಿಕೆಯ ಸದಸ್ಯರಾದ ಜೆ. ಎಸ್. ಜಗದೀಶ್ ರವರು ಕಳೆದ ನಾಲ್ಕುವರೆ ವರ್ಷಗಳಿಂದ ನಮ್ಮ ವಾರ್ಡಿನ ಮೂಲಭೂತ ಸೌಕರ್ಯಗಳಾದ ನೀರು, ರಸ್ತೆ, ಬೀದಿ ದೀಪ, ಒಳಚರಂಡಿ ಮತ್ತು ಶುಚೀಕರಣವು ಸೇರಿದಂತೆ ಬಹುತೇಕ ಕೆಲಸವನ್ನು ಬಹಳ ಚೆನ್ನಾಗಿ ಮಾಡಿದ್ದಾರೆ ಎಂದು ಹೇಳಲು ಸಂತೋಷವೆನಿಸುತ್ತದೆ. ಶ್ರೀಯುತರು ಮಾದರಿ ಪಾಲಿಕೆ ಸದಸ್ಯರಾಗಿದ್ದಾರೆ.
ಮರಿಸ್ವಾಮಿ, ಶಾರದಾದೇವಿನಗರ

4. ಜೆ. ಎಸ್. ಜಗದೀಶ್ ರವರು ಮಾದರಿ ಕಾರ್ಪೊರೇಟರ್ ಆಗಿ ಹೊರ ಹೊಮ್ಮಿದ್ದಾರೆ. ಅವರ ತಂದೆ ಶ್ರೀಯು ಜೈನಹಳ್ಳಿ ಸತ್ಯನಾರಾಯಣಗೌಡರು ‘ಜ್ಞಾನಬುತ್ತಿ’ ಎಂಬ ಉದ್ಯೋಗ ಮಾರ್ಗದರ್ಶನ ತರಬೇತಿ ನೀಡುವ ಸಂಸ್ಥೆಯನ್ನು ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಕಟ್ಟಿ ಕಳೆದ 35 ವರ್ಷಗಳಿಂದ ನಿಸ್ವಾರ್ಥವಾಗಿ ಬೆಳೆಸಿಕೊಂಡು ಬರುತ್ತಿದ್ದಾರೆ. ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ಪ್ರತಿಭಾವಂತರು. ಅವರ ಶ್ರೀ ರಕ್ಷೆ ಮಾರ್ಗದರ್ಶನ ಜಗದೀಶ್ ಅವರನ್ನು ಕಾಯುತ್ತಿದೆ ಎನ್ನುವುದು ನನ್ನ ನಂಬಿಕೆ. ಸರ್ವರಿಗೂ ಶುಭವಾಗಲಿ.
-ಕೆಂಪಾಚಾರ್ ಕುಪ್ಯ, ಶಾರದಾದೇವಿನಗರ

5. ನಮ್ಮೆಲ್ಲರ ಗೌರವಕ್ಕೆ ಮತ್ತು ಪ್ರೀತಿಗೆ ಪಾತ್ರರಾಗಿರುವ ನಗರ ಪಾಲಿಕೆ ಸದಸ್ಯ ಜೆ. ಎಸ್. ಜಗದೀಶ್ ಅಣ್ಣ, ನಮ್ಮ ವಾರ್ಡಿನ ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಅವರಿಗೆ ನಮ್ಮ ಮನದಾಳದ ಅಭಿನಂದನೆಗಳು. ಮುಂದಿನ ಅವರ ಗೆಲುವು ನಮ್ಮೆಲ್ಲರ ಗೆಲುವು ಎಂದು ಶುಭಕೋರುತ್ತೇವೆ.
– ಸುರೇಶ ಮತ್ತು ಜಗದೀಶ, ವಸಂತನಗರ

ಜೆ.ಎಸ್. ಜಗದೀಶ್ ರವರು ಮಾಡಿರುವ ಅಭಿವೃದ್ಧಿಗಳ ಕಿರು ಚಿತ್ರಣ ಹಾಗು ಜನರು ಅವರಿಗೆ ನೀಡಿರುವ ಸಂದೇಶಗಳ ವಿಡಿಯೋವನ್ನು ವೀಕ್ಷಿಸಿ..

NO COMMENTS

LEAVE A REPLY